ಶನಿವಾರ, ಏಪ್ರಿಲ್ 4, 2026

ಮನೋವಿಜ್ಞಾನ ಕ್ವಿಜ್

🧠 ಉನ್ನತ ಮಟ್ಟದ ಮನೋವಿಜ್ಞಾನ ಕ್ವಿಜ್

```html Psychology Quiz

Question

```

Psychology quiz

Question 1 of 25
Loading question...

Quiz Completed!

0/25

ಸೋಮವಾರ, ಮಾರ್ಚ್ 23, 2026

# Interactive 25-Question Psychology Quiz for Blogger
Question 1 of 25
Loading question...
Quick Explanation:

Quiz Completed!

Your ultimate psychology score is:

0

ಭಾನುವಾರ, ಡಿಸೆಂಬರ್ 28, 2025

SSLC NOTES 2026

*10 SOCIAL SCIENCE PASSING PACKAGE 226


ಮೈಸೂರು ರಾಜ್ಯ ಮತ್ತು ಬ್ರಿಟಿಷರು

 ಮೈಸೂರು ರಾಜ್ಯ ಮತ್ತು ಬ್ರಿಟಿಷರು 

         ವಿಜಯನಗರದ ಮಾಂಡಲೀಕರಾಗಿದ್ದ ಮೈಸೂರು ಒಡೆಯರ್ ಮನೆತನದ ಅರಸರು ಸುಮಾರು 17ನೇ ಶತಮಾನದಲ್ಲಿ ತಮ್ಮದೇ ಆದ ವಿಶಿಷ್ಟ ಇತಿಹಾಸ ಹೊಂದಿದ್ದಾರೆ....

                 ಕ್ರಿಸ್ತಶಕ 1399 ರಲ್ಲಿ ವಿಜಯ ಮತ್ತು ಕೃಷ್ಣ ಎಂಬ  ಸಹೋದರರು ದ್ವಾರಕೆಯಿಂದ ಇಲ್ಲಿಗೆ ಬಂದು ಮೈಸೂರು ಒಡೆಯರ ಆಳ್ವಿಕೆ ಹೊಂದಿದ್ದ ಈ ಅಂಶವು ರಾಜ ಒಡೆಯರ್ ಕಾಲದಿಂದ ವಿಶಿಷ್ಟವಾಗಿ ಬೆಳೆಯಿತು. ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ಮಂಡಳಿಕ ಅಧಿಕಾರಿಯನ್ನು ಹೊರದೂಡಿ ಅದನ್ನು ರಾಜ ಒಡೆಯರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದರು. 

         ಈ ವಂಶದ ಕಂಠೀರವ ನರಸರಾಜ ಒಡೆಯರು ಖಡ್ಗವರಸೆಯ ನೈಪುಣ್ಯತೆ ಖ್ಯಾತಿಯಾಗಿದ್ದು, ವಿಜಯಪುರದ ರಾಣದುಲ್ಲಾ ಖಾನನನು ಯಶಸ್ವಿಯಾಗಿ ಎದುರಿಸಿ, ಸತ್ಯಮಂಗಲ, ಬೆಟ್ಟದಪುರ, ಅರಕಲಗೂಟಡು  ಪ್ರದೇಶಗಳನ್ನು ಆಕ್ರಮಿಸಿ ಮೈಸೂರು ರಾಜ್ಯವನ್ನು ವಿಸ್ತರಿಸಿದ್ದರು. ಶ್ರೀರಂಗಪಟ್ಟಣದಲ್ಲಿ ನರಸಿಂಹ ದೇವಾಲಯವನ್ನು ಸ್ಥಾಪಿಸಿದರು. ಬಂಗಾರದೊಡ್ಡಿ ಕಾಲುವೆ   ನೀರಾವರಿಗೆ ನೀಡಿದ ಕೊಡುಗೆಯಾಗಿದೆ. ಕಂಠೀರಾಯ ಪಣ ಚಿನ್ನದ ನಾಣ್ಯ ಗಳನ್ನು  ಟoಕಿಸಿದರು.

ಗೋವಿಂದ ವೈದ್ಯ, ಭಾಸ್ಕರ, ತಿಮ್ಮರಸ ಇನ್ನು ಮುಂತಾದ ಕವಿಗಳಿಗೆ ಆಶ್ರಯದಾತರಾಗಿದ್ದರು. ನರಸರಾಜರ ನಂತರ ಬಂದ ದೊಡ್ಡ ದೇವರಾಯರು (1655) ಕೆಳತಿ ಶಿವಪ್ಪನಾಯಕನ ದಾಳಿಯನ್ನು ಯಶಸ್ವಿಯಾಗಿ ಹಿಂದಕ್ಕೆ ಅಟ್ಟಿದರು. ಕುಣಿಗಲ್, ಚಿಕ್ಕನಾಯಕನಹಳ್ಳಿಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹಾಕಿಸಿದರು. ಅಲ್ಲಿನ ನಂದಿ ವಿಗ್ರಹ ಸ್ಥಾಪನೆ ಮಾಡಿದರು.

ಚಿಕ್ಕದೇವರಾಯ ಒಡೆಯರು (1673-1704)

*ಇವರು ಮೈಸೂರಿನ ಸುಪ್ರಸಿದ್ದ ದೊರೆಗಳಲ್ಲೊಬ್ಬರು.

*ಕೆಳದಿ ಅರಸರಿಂದ ಬಾಣಾವರ, ವಸ್ತಾರೆ. ಚಿಕ್ಕಮಗಳೂರುಗಳನ್ನು ಗೆದ್ದರು. 

*ಇವರು ತುಮಕೂರು, ಹೊಸಕೋಟೆ, ಸೇಲಂ ಜಿಲ್ಲೆಯ ಕೆಲಭಾಗಗಳನ್ನು ವಶಪಡಿಸಿಕೊಂಡರು.

*ಮಾಗಡಿ, ಮಧುಗಿರಿ, ಕೊರಟಗೆರೆ, ಪ್ರಾಂತ್ಯಗಳು ಇವರ ರಾಜ್ಯಕ್ಕೆ ಸೇರ್ಪಡೆಯಾದವು.

*ಶಿವಾಜಿಯ ಮಗ ಸಂಭಾಜಿಯು ಕೆಳದಿ ಅರಸರು ಮತ್ತು ಗೋಲ್ಗೊಂಡ ನವಾಬರೊಡನೆ ಸೇರಿ ಒಡೆಯರು ಈ ಸೇನೆಯನ್ನು ಸೋಲಿಸಿದರು.

*ಇದೇ ಕಾಲಕ್ಕೆ ವಿಜಾಮರವನ್ನು ಗೆದ್ದು ಬೆಂಗಳೂರನ್ನು ವಶಪಡಿಸಿಕೊಂಡ ಮೊಘಲರಿಂದ ಬೆಂಗಳೂರನ್ನು ಚಿಕ್ಕದೇವರಾಜ ಒಡೆಯರು ಗುತ್ತಿಗೆಯಾಗಿ ಪಡೆದುಕೊಂಡನು.

*ಔರಂಗಜೇಬನ ಗೆಳೆತನ ಬೆಳೆಸಿ ಬೆಂಗಳೂರಿಗೆ ಗೊತ್ತುಪಡಿಸಿದ ಗುತ್ತಿಗೆ ಹಣ (ಇಜಾರಾ) ವನ್ನು ನಿಗಧಿತ ಸಮಯದಲ್ಲಿ ಮೊಘಲರಿಗೆ ಕೊಡುತ್ತಿದ್ದರು. ಒಂದು ಸೇನಾ ತುಕಡಿಯನ್ನು ಮೊಘಲರಿಗಾಗಿ ಸಿದ್ಧವಾಗಿಡಲು ಒಪ್ಪಿದ್ದರು.

*"ಕರ್ನಾಟಕ ಚಕ್ರವರ್ತಿ" ಎಂಬ ಬಿರುದನ್ನು ಹೊಂದಿದ್ದು ಚಿಕ್ಕದೇವರಾಜ ಒಡೆಯನು ಆಡಳಿತವನ್ನು ಸುವ್ಯವಸ್ಥೆಗೊಳಿಸಿದನು. ಆಡಳಿತದಲ್ಲಿ ಉತ್ತಮ ಸುಧಾರಣೆಗಳನ್ನು ಜಾರಿಗೆ ತಲು ಅಠಾರ ಕಚೇರಿ”ಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.

*ಪತ್ರ ವ್ಯವಹಾರಕ್ಕಾಗಿ ವ್ಯವಸ್ಥೆ ಏರ್ಪಡಿಸಿ 'ಅಂಚೆ' ಇಲಾಖೆಯು ಆರಂಭಿಸಿದರು.

*ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ಖಜಾನೆಯಲ್ಲಿ ಅಪಾರ ಧನಕನಕಗಳನ್ನು ಸಂಗ್ರಹಿಸಿ “ನವಕೋಟಿ ನಾರಾಯಣ" ಎಂಬ ಬಿರುದನ್ನು ಪಡೆದರು.

* ಕಾವೇರಿ ನದಿಗೆ ಅಣೆಕಟ್ಟು ಕಟ್ಟಿಸಿ ಚಿಕ್ಕದೇವರಾಜನಾಲೆ ಮತ್ತು ದೊಡ್ಡ ದೇವರಾಜ ನಾಲೆ ಬಂದ ಕಾಲುವೆಗಳನ್ನು ನಿರ್ಮಿಸಿ ಅಧಿಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಮಾಡಿದರು.

*ಬೆಂಗಳೂರಿನ ಕೋಟೆ, ವೆಂಕಟರಮಣ ಮಂದಿರ, ಮೈಸೂರಿನ ಶ್ವೇತವರಹಾ ಮಂದಿರ, ಗುಂಡ್ಲುಪೇಟೆಯ ಪರಾಸುದೇವ ಮಂದಿರ ನಿರ್ಮಾಣ ಇವರ ಕಾಲದಲ್ಲಾದವು.

*ಚಿಕ್ಕದೇವರಾಜ ಒಡೆಯರು ಸ್ವತಃ ಕವಿಯಾಗಿದ್ದು ಇವರು ಮೇಲುಕೋಟೆ ಚೆಲುವ ನಾರಾಯಣನನ್ನು ಕುರಿತು "ಚಿಕ್ಕ ದೇವರಾಜ ಭಿನ್ನಪಂ” ಎಂಬ ಕಾವ್ಯವನ್ನು ಕನ್ನಡದಲ್ಲಿ ರಚಿಸಿದ್ದಾರೆ.

* ಸಿಂಗರಾರ, ಚಿಕುಪಾಧ್ಯಾಯ, ಸಂಚಿಹೊನ್ನಮ್ಮ, ಇವರುಗಳು ಆಸ್ಥಾನ ಕವಿಗಳಾಗಿದ್ದರು. ಇವರು ಮರಣವನ್ನಪ್ಪಿದ ಸಂದರ್ಭದಲ್ಲಿ ತನ್ನ ರಾಣಿಯರು ಯಾರು ಸಹಗಮನ ಮಾಡಬಾರದೆಮದು ಆಜ್ಞಾಪಿಸಿದ್ದರು.



                           ಅಧ್ಯಾಯ-1

ಭೂಗೋಳಶಾಸ್ತ್ರ ಒಂದು ಅಧ್ಯಯನ



1. ಭೂಗೋಳಶಾಸ್ತ್ರವನ್ನು "ಭೂಮಿಯ ವಿಜ್ಞಾನ' ಮತ್ತು 'ಮಾನವನ ವಾಸಸ್ಥಾನ'ದ ಅಧ್ಯಯನ ಎನ್ನುವರು.

2. ಜಿಯೋಗ್ರಪಿ ಎಂಬ ಪದವು ಗ್ರೀಕ್ ಭಾಷೆಯ 'ಜಿಯೋ' ಮತ್ತು 'ಗ್ರಪೋಸ್' ಪದಗಳಿಂದ ಬಂದಿದೆ. ಜಿಯೋ ಎಂದರೆ ಭೂಮಿ ಮತ್ತು ಗ್ರಪೋಸ್ ಎಂದರೆ ಅಧ್ಯಯನ ಅಥವಾ ವಿವರಣೆ.

3. ಆಧುನಿಕ ಭೂಗೋಳಶಾಸ್ತ್ರವು ಭೂಮಿ ಮತ್ತು ಅದರ ನಿವಾಸಿಗಳ ಬಗ್ಗೆ ತಿಳಿಸುತ್ತದೆ.

4. ಭೂಗೋಳಶಾಸ್ತ್ರವನ್ನು 'ಎಲ್ಲಾ ವಿಜ್ಞಾನಗಳ ಮಾತೃ' ಎಂದು ಕರೆಯುತ್ತಾರೆ.

5. ಜೀವ ಭೂಗೋಳಶಾಸ್ತ್ರ: ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳೊಡನೆ ಸಂಬಂಧವನ್ನು ಹೊಂದಿದೆ.

6. ಖಗೋಳ ಭೂಗೋಳಶಾಸ್ತ್ರ: ಆಕಾಶಕಾಯಗಳಿಗೆ ಸಂಬಂಧಿಸಿದ್ದಾಗಿದ್ದು ಬ್ರಹ್ಮಾಂಡ, ಸೌರವ್ಯೂಹ, ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳ ಅಧ್ಯಯನವಾಗಿದೆ.

7. ಗಣಿತ ಭೂಗೋಳಶಾಸ್ತ್ರ ಆಕ್ಷಾಂಶಗಳು, ರೇಖಾಂಶಗಳು, ಭೂಮಿಯ ಆಕಾರ, ಗಾತ್ರ, ನಕ್ಷಾ ರಚನೆ ಮತ್ತು ಸಂಖ್ಯಾತ್ಮಕ ತಂತ್ರಗಳ ಬಗ್ಗೆ ಅರಿಯಲು ಸಹಾಯಮಾಡುತ್ತದೆ.

8. ರಾಜಕೀಯ ಭೂಗೋಳಶಾಸ್ತ್ರ: ಪ್ರಾದೇಶಿಕ ಘಟಕ, ಪ್ರಜೆಗಳು, ಹಂಚಿಕೆ, ರಾಜಕೀಯ ಹಿನ್ನೆಲೆ, ರಾಜಕೀಯ ವಿಭಾಗಗಳು ಇತ್ಯಾದಿಗಳನ್ನು ವಿವರಿಸುತ್ತದೆ.

9. ಆರ್ಥಿಕ ಭೂಗೋಳಶಾಸ್ತ್ರ: ಉತ್ಪಾದನೆ, ಹಂಚಿಕೆ ಮತ್ತು ಉಪಭೋಗಗಳ ಮತ್ತು ಪ್ರಾದೇಶಿಕ ಲಕ್ಷಣಗಳನ್ನು ತಿಳಿಸುತ್ತದೆ ಮತ್ತು ಮಾನವನ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಲು ಅತ್ಯಂತ ಸೂಕ್ತವಾದ ಸ್ಥಳಗಳನ್ನು ತಿಳಿದುಕೊಳ್ಳಲು ಸಹಾಯಮಾಡುತ್ತದೆ.

10. ವಾಣಿಜ್ಯ ಭೂಗೋಳಶಾಸ್ತ್ರ: ವ್ಯಾಪಾರದ ಪ್ರಾದೇಶಿಕ ಹಂಚಿಕೆ ಮತ್ತು ವಾಣಿಜ್ಯ ವಸ್ತುಗಳ ವಿನಿಮಯ, ವ್ಯಾಪಾರದ ಸಮತೋಲನೆ. ಅಂತರಿಕ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಇತ್ಯಾದಿಗಳನ್ನು ತಿಳಿಸುತ್ತದೆ.


11. ಜನಸಂಖ್ಯಾ ಭೂಗೋಳಶಾಸ್ತ್ರ: ಜನಸಂಖ್ಯೆ ಹಂಚಿಕೆ, ಬೆಳವಣಿಗೆ, ಜನಸಾಂದ್ರತೆ, ವಲಸೆ ಮತ್ತು ಇತರೆ ಜನಸಂಖ್ಯೆಯ ವೈವಿಧ್ಯಮಯ ಘಟಕಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

12. ಭೂಗೋಳಶಾಸ್ತ್ರವನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿದೆ. 1.ಪ್ರಾಕೃತಿಕ ಭೂಗೋಳಶಾಸ್ತ್ರ,2. ಮಾನವ ಭೂಗೋಳಶಾಸ್ತ್ರ :

 13. ಪ್ರಾಕೃತಿಕ ಭೂಗೋಳಶಾಸ್ತ್ರ ಸ್ವಾಭಾವಿಕವಾಗಿ ನಿರ್ಮಾಣವಾಗಿರುವ ಭೂಮಿಯ ಪ್ರಾಕೃತಿಕ ಅಂಶಗಳನ್ನು ತಿಳಿಸುತ್ತದೆ.




14. ಭೂರಚನಾಶಾಸ್ತ್ರ: ಭೂಮಿ, ಭೂಮಿಯ ಲಕ್ಷಣಗಳು ಮತ್ತು ಭೂಸ್ವರೂಪಗಳ ಕುರಿತ ಅಧ್ಯಯನ.


15. ವಾಯುಗುಣಶಾಸ್ತ್ರ: ವಾಯುಗುಣ, ವಾಯುಮಂಡಲದ ಪರಿಸ್ಥಿತಿ ಮತ್ತು ವಾಯುಗುಣದ ಬದಲಾವಣೆ ಇತ್ಯಾದಿಗಳನ್ನು ಅಭ್ಯಾಸಿಸುತ್ತದೆ.


16. ಹವಾಮಾನಶಾಸ್ತ್ರ: ಹವಾಮಾನದ ಪರಿಸ್ಥಿತಿಗಳು ಮತ್ತು ಹವಾಮಾನದ ಬದಲಾವಣೆಗಳನ್ನು ಕುರಿತ ಅಧ್ಯಯನ.


17. ಸಾಗರಶಾಸ್ತ್ರ: ಸಮುದ್ರಗಳು, ಮಹಾಸಾಗರಗಳು, ಸಾಗರ ತಳದ ಭೂಸ್ವರೂಪ, ಸಾಗರಗಳ ನೀರಿನ ಲಕ್ಷಣಗಳು, ಸಾಗರ ನೀರಿನ ಚಲನೆಗಳು ಇತ್ಯಾದಿ ಕುರಿತ ಅಧ್ಯಯನ.

18. ಮಣ್ಣಿನ ಭೂಗೋಳಶಾಸ್ತ್ರ ಭೂಮಿಯ ಮೇಲಿನ ಮಣ್ಣುಗಳ ರಚನೆ ಮತ್ತು ಹಂಚಿಕೆ.

19. ಮಾನವ ಭೂಗೋಳಶಾಸ್ತ್ರ, ಸಾಂಸ್ಕೃತಿಕ ಪರಿಸರದ ಅಂಶಗಳು ಅಥವಾ ಮಾನವ ನಿರ್ಮಿತ ಲಕ್ಷಣಗಳನ್ನು ವವಿವರಿಸುತ್ತದೆ.


20.ಜೀವ ಭೂಗೋಳಶಾಸ್ತ್ರ ಇದು ಭೂಮಿಯ ಮೇಲಿನ ಜೀವಿಗಳ ಬಗ್ಗೆ ಅಭ್ಯಸಿಸುತ್ತದೆ.


21. ಸಸ್ಯ ಭೂಗೋಳಶಾಸ್ತ್ರ: ಸ್ವಾಭಾವಿಕ ಸಸ್ಯವರ್ಗ, ಆರಣ್ಯ, ಹುಲ್ಲುಗಾವಲು ಮುಂತಾದವುಗಳ ಹಂಚಿಕೆಯನ್ನು ತಿಳಿಸುತ್ತದೆ.


22. ಪ್ರಾಣಿ ಭೂಗೋಳಶಾಸ್ತ್ರ: ಭೂಮಿಯ ಮೇಲಿನ ಪ್ರಾಣಿ ಸಂಪತ್ತಿನ ಹಂಚಿಕೆಯನ್ನು ತಿಳಿಸುವ ಅಧ್ಯಯನವಾಗಿದೆ.


1. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.


1. ಭೂಗೋಳಶಾಸ್ತ್ರವನ್ನು ಅರ್ಥೈಸಿ.

ಉ: ಭೂ ಮೇಲ್ಕೆಯನ್ನು ಆವರಿಸಿರುವ ಶಿಲಾಗೋಳ, ಜಲಗೋಳ, ವಾಯುಗೋಳ ಮತ್ತು ಜೀವಗೋಳ ಹಾಗೂ ಅವುಗಳ ಪರಸ್ಪರ ಸಂಬಂಧ ಕುರಿತು ಅಧ್ಯಯನ ಮಾಡುವುದನ್ನು ಭೂಗೋಳಶಾಸ್ತ್ರ ಎನ್ನುವರು


2. ಆಧುನಿಕ ಭೂಗೋಳಶಾಸ್ತ್ರ ಎಂದರೇನ?ಉ: ಆಧುನಿಕ ಭೂಗೋಳಶಾಸ್ತ್ರವು 'ಭೂಮಿ ಮತ್ತು ಅದರ ನಿವಾಸಿಗಳ ಬಗ್ಗೆ ತಿಳಿಸುತ್ತದೆ.


3. ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡುವ ಭೂಗೋಳಶಾಸ್ತ್ರದ ಶಾಖೆ ಯಾವುದು?


ಉ: ಖಗೋಳ ಭೂಗೋಳಶಾಸ್ತ್ರ.

ಉ: ಭೂಮಿಯ ಮೇಲಿನ ಜೀವಿಗಳ ಬಗೆಗೆ ಅಧ್ಯಯನ ಮಾಡುವ ಶಾಸ್ತ್ರವಾಗಿದೆ


4. ಜೀವ ಭೂಗೋಳಶಾಸ್ತ್ರವೆಂದರೇನು?


5. ಪಾಕೃತಿಕ ಭೂಗೋಳಶಾಸ್ತ್ರದ ಯಾವುದಾದರೂ ಒಂದು ಶಾಖೆಯನ್ನು ಹೆಸರಿಸಿ

ಉ: ಹವಮಾನಶಾಸ್ತ್ರ, ಸಾಗರಶಾಸ್ತ್ರ, ಖಗೋಳಶಾಸ್ತ್ರ ಮತ್ತು ಮಣ್ಣಿನಶಾಸ್ತ್ರ ಇತ್ಯಾದಿ.

ಮನೋವಿಜ್ಞಾನ ಕ್ವಿಜ್ 🧠 ಉನ್ನತ ಮಟ್ಟದ ಮನೋವಿಜ್ಞಾನ ಕ್ವಿಜ್ ಫಲಿತಾಂಶ ನೋಡಿ