- ನಮ್ಮ ದೇಶದ ರಾಷ್ಟ್ರಧ್ವಜವು ಭಾರತದ ಗುರುತು ಮತ್ತು ಗೌರವದ ಸಂಕೇತವಾಗಿದೆ. ಈ ತ್ರಿವರ್ಣ ಧ್ವಜವು ನಮ್ಮ ದೇಶದ ವೈವಿಧ್ಯತೆ, ಏಕತೆ ಮತ್ತು ಸಾರ್ವಭೌಮತ್ವದ ಸಂಕೇತವಾಗಿದೆ. ಇದನ್ನು ನೋಡಿದಾಗ, ನಮ್ಮ ಹೃದಯಗಳಲ್ಲಿ ದೇಶಭಕ್ತಿ ಮತ್ತು ಹೆಮ್ಮೆಯ ಭಾವನೆಗಳು ಜಾಗೃತಗೊಳ್ಳುತ್ತವೆ.
- ಭಾರತದ ತ್ರಿವರ್ಣ ಧ್ವಜದ ಮೇಲ್ಭಾಗದಲ್ಲಿ ಕಡು ಕೇಸರಿ ಮಧ್ಯ ಬಿಳಿ ಹಾಗು ಕೆಳಗೆ ಕಡು ಹಸಿರು ಬಣ್ಣಗಳಿವೆ. ಬಿಳಿಯ ಬಣ್ಣದ ಪಟ್ಟಿಯ ಮಧ್ಯದಲ್ಲಿ ನೀಲಿ ಬಣ್ಣದ ಚಕ್ರದಲ್ಲಿ 24 ಅರಗಗಳಿಂದ ಕೂಡಿದೆ.
- ಕೇಸರಿ ಬಣ್ಣ: ತ್ಯಾಗ, ದೇಶದ ಒಳಿತಿಗಾಗಿ ನಡೆಯುವ ಬಲಿದಾನದ ಸಂಕೇತವಾಗಿದೆ.
- ಬಿಳಿ ಬಣ್ಣ: ಸತ್ಯ, ಶಾಂತಿ ಮತ್ತು ಪರಿಶುದ್ಧತೆಯ ಸಂಕೇತ.
- ಹಸಿರು ಬಣ್ಣ: ಭೂಮಿ ಸಂಕೇತವಾಗಿ ಕೃಷಿ ಕೈಗಾರಿಕೆಗಳ ಸಮೃದ್ಧಿಯನ್ನು ಸೂಚಿಸುತ್ತದೆ.
ಭಾರತದ ರಾಷ್ಟ್ರ ಧ್ವಜ ಸಂಹಿತೆಯನ್ನು 2002 ಜನವರಿ 26ರಂದು ಜಾರಿಗೆ ತರಲಾಗಿದೆ.2022ರ ಜುಲೈ 20ರಂದು ಸಂಹಿತೆ ತಿದ್ದುಪಡಿ ಮಾಡಿದ್ದು, ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಷ್ಟ್ರ ಧ್ವಜ ವನ್ನು ಅತ್ತಿ, ರೇಷ್ಮೆ, ಖಾದಿ ಬಟ್ಟೆ ಪ್ಲಾಸ್ಟಿಕ್ ಗಳಿಂದಲೂ ತಯಾರಿಸಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಲಾಗಿದೆ.
