ಭಾನುವಾರ, ಡಿಸೆಂಬರ್ 28, 2025

                           ಅಧ್ಯಾಯ-1

ಭೂಗೋಳಶಾಸ್ತ್ರ ಒಂದು ಅಧ್ಯಯನ



1. ಭೂಗೋಳಶಾಸ್ತ್ರವನ್ನು "ಭೂಮಿಯ ವಿಜ್ಞಾನ' ಮತ್ತು 'ಮಾನವನ ವಾಸಸ್ಥಾನ'ದ ಅಧ್ಯಯನ ಎನ್ನುವರು.

2. ಜಿಯೋಗ್ರಪಿ ಎಂಬ ಪದವು ಗ್ರೀಕ್ ಭಾಷೆಯ 'ಜಿಯೋ' ಮತ್ತು 'ಗ್ರಪೋಸ್' ಪದಗಳಿಂದ ಬಂದಿದೆ. ಜಿಯೋ ಎಂದರೆ ಭೂಮಿ ಮತ್ತು ಗ್ರಪೋಸ್ ಎಂದರೆ ಅಧ್ಯಯನ ಅಥವಾ ವಿವರಣೆ.

3. ಆಧುನಿಕ ಭೂಗೋಳಶಾಸ್ತ್ರವು ಭೂಮಿ ಮತ್ತು ಅದರ ನಿವಾಸಿಗಳ ಬಗ್ಗೆ ತಿಳಿಸುತ್ತದೆ.

4. ಭೂಗೋಳಶಾಸ್ತ್ರವನ್ನು 'ಎಲ್ಲಾ ವಿಜ್ಞಾನಗಳ ಮಾತೃ' ಎಂದು ಕರೆಯುತ್ತಾರೆ.

5. ಜೀವ ಭೂಗೋಳಶಾಸ್ತ್ರ: ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳೊಡನೆ ಸಂಬಂಧವನ್ನು ಹೊಂದಿದೆ.

6. ಖಗೋಳ ಭೂಗೋಳಶಾಸ್ತ್ರ: ಆಕಾಶಕಾಯಗಳಿಗೆ ಸಂಬಂಧಿಸಿದ್ದಾಗಿದ್ದು ಬ್ರಹ್ಮಾಂಡ, ಸೌರವ್ಯೂಹ, ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳ ಅಧ್ಯಯನವಾಗಿದೆ.

7. ಗಣಿತ ಭೂಗೋಳಶಾಸ್ತ್ರ ಆಕ್ಷಾಂಶಗಳು, ರೇಖಾಂಶಗಳು, ಭೂಮಿಯ ಆಕಾರ, ಗಾತ್ರ, ನಕ್ಷಾ ರಚನೆ ಮತ್ತು ಸಂಖ್ಯಾತ್ಮಕ ತಂತ್ರಗಳ ಬಗ್ಗೆ ಅರಿಯಲು ಸಹಾಯಮಾಡುತ್ತದೆ.

8. ರಾಜಕೀಯ ಭೂಗೋಳಶಾಸ್ತ್ರ: ಪ್ರಾದೇಶಿಕ ಘಟಕ, ಪ್ರಜೆಗಳು, ಹಂಚಿಕೆ, ರಾಜಕೀಯ ಹಿನ್ನೆಲೆ, ರಾಜಕೀಯ ವಿಭಾಗಗಳು ಇತ್ಯಾದಿಗಳನ್ನು ವಿವರಿಸುತ್ತದೆ.

9. ಆರ್ಥಿಕ ಭೂಗೋಳಶಾಸ್ತ್ರ: ಉತ್ಪಾದನೆ, ಹಂಚಿಕೆ ಮತ್ತು ಉಪಭೋಗಗಳ ಮತ್ತು ಪ್ರಾದೇಶಿಕ ಲಕ್ಷಣಗಳನ್ನು ತಿಳಿಸುತ್ತದೆ ಮತ್ತು ಮಾನವನ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಲು ಅತ್ಯಂತ ಸೂಕ್ತವಾದ ಸ್ಥಳಗಳನ್ನು ತಿಳಿದುಕೊಳ್ಳಲು ಸಹಾಯಮಾಡುತ್ತದೆ.

10. ವಾಣಿಜ್ಯ ಭೂಗೋಳಶಾಸ್ತ್ರ: ವ್ಯಾಪಾರದ ಪ್ರಾದೇಶಿಕ ಹಂಚಿಕೆ ಮತ್ತು ವಾಣಿಜ್ಯ ವಸ್ತುಗಳ ವಿನಿಮಯ, ವ್ಯಾಪಾರದ ಸಮತೋಲನೆ. ಅಂತರಿಕ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಇತ್ಯಾದಿಗಳನ್ನು ತಿಳಿಸುತ್ತದೆ.


11. ಜನಸಂಖ್ಯಾ ಭೂಗೋಳಶಾಸ್ತ್ರ: ಜನಸಂಖ್ಯೆ ಹಂಚಿಕೆ, ಬೆಳವಣಿಗೆ, ಜನಸಾಂದ್ರತೆ, ವಲಸೆ ಮತ್ತು ಇತರೆ ಜನಸಂಖ್ಯೆಯ ವೈವಿಧ್ಯಮಯ ಘಟಕಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

12. ಭೂಗೋಳಶಾಸ್ತ್ರವನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿದೆ. 1.ಪ್ರಾಕೃತಿಕ ಭೂಗೋಳಶಾಸ್ತ್ರ,2. ಮಾನವ ಭೂಗೋಳಶಾಸ್ತ್ರ :

 13. ಪ್ರಾಕೃತಿಕ ಭೂಗೋಳಶಾಸ್ತ್ರ ಸ್ವಾಭಾವಿಕವಾಗಿ ನಿರ್ಮಾಣವಾಗಿರುವ ಭೂಮಿಯ ಪ್ರಾಕೃತಿಕ ಅಂಶಗಳನ್ನು ತಿಳಿಸುತ್ತದೆ.




14. ಭೂರಚನಾಶಾಸ್ತ್ರ: ಭೂಮಿ, ಭೂಮಿಯ ಲಕ್ಷಣಗಳು ಮತ್ತು ಭೂಸ್ವರೂಪಗಳ ಕುರಿತ ಅಧ್ಯಯನ.


15. ವಾಯುಗುಣಶಾಸ್ತ್ರ: ವಾಯುಗುಣ, ವಾಯುಮಂಡಲದ ಪರಿಸ್ಥಿತಿ ಮತ್ತು ವಾಯುಗುಣದ ಬದಲಾವಣೆ ಇತ್ಯಾದಿಗಳನ್ನು ಅಭ್ಯಾಸಿಸುತ್ತದೆ.


16. ಹವಾಮಾನಶಾಸ್ತ್ರ: ಹವಾಮಾನದ ಪರಿಸ್ಥಿತಿಗಳು ಮತ್ತು ಹವಾಮಾನದ ಬದಲಾವಣೆಗಳನ್ನು ಕುರಿತ ಅಧ್ಯಯನ.


17. ಸಾಗರಶಾಸ್ತ್ರ: ಸಮುದ್ರಗಳು, ಮಹಾಸಾಗರಗಳು, ಸಾಗರ ತಳದ ಭೂಸ್ವರೂಪ, ಸಾಗರಗಳ ನೀರಿನ ಲಕ್ಷಣಗಳು, ಸಾಗರ ನೀರಿನ ಚಲನೆಗಳು ಇತ್ಯಾದಿ ಕುರಿತ ಅಧ್ಯಯನ.

18. ಮಣ್ಣಿನ ಭೂಗೋಳಶಾಸ್ತ್ರ ಭೂಮಿಯ ಮೇಲಿನ ಮಣ್ಣುಗಳ ರಚನೆ ಮತ್ತು ಹಂಚಿಕೆ.

19. ಮಾನವ ಭೂಗೋಳಶಾಸ್ತ್ರ, ಸಾಂಸ್ಕೃತಿಕ ಪರಿಸರದ ಅಂಶಗಳು ಅಥವಾ ಮಾನವ ನಿರ್ಮಿತ ಲಕ್ಷಣಗಳನ್ನು ವವಿವರಿಸುತ್ತದೆ.


20.ಜೀವ ಭೂಗೋಳಶಾಸ್ತ್ರ ಇದು ಭೂಮಿಯ ಮೇಲಿನ ಜೀವಿಗಳ ಬಗ್ಗೆ ಅಭ್ಯಸಿಸುತ್ತದೆ.


21. ಸಸ್ಯ ಭೂಗೋಳಶಾಸ್ತ್ರ: ಸ್ವಾಭಾವಿಕ ಸಸ್ಯವರ್ಗ, ಆರಣ್ಯ, ಹುಲ್ಲುಗಾವಲು ಮುಂತಾದವುಗಳ ಹಂಚಿಕೆಯನ್ನು ತಿಳಿಸುತ್ತದೆ.


22. ಪ್ರಾಣಿ ಭೂಗೋಳಶಾಸ್ತ್ರ: ಭೂಮಿಯ ಮೇಲಿನ ಪ್ರಾಣಿ ಸಂಪತ್ತಿನ ಹಂಚಿಕೆಯನ್ನು ತಿಳಿಸುವ ಅಧ್ಯಯನವಾಗಿದೆ.


1. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.


1. ಭೂಗೋಳಶಾಸ್ತ್ರವನ್ನು ಅರ್ಥೈಸಿ.

ಉ: ಭೂ ಮೇಲ್ಕೆಯನ್ನು ಆವರಿಸಿರುವ ಶಿಲಾಗೋಳ, ಜಲಗೋಳ, ವಾಯುಗೋಳ ಮತ್ತು ಜೀವಗೋಳ ಹಾಗೂ ಅವುಗಳ ಪರಸ್ಪರ ಸಂಬಂಧ ಕುರಿತು ಅಧ್ಯಯನ ಮಾಡುವುದನ್ನು ಭೂಗೋಳಶಾಸ್ತ್ರ ಎನ್ನುವರು


2. ಆಧುನಿಕ ಭೂಗೋಳಶಾಸ್ತ್ರ ಎಂದರೇನ?ಉ: ಆಧುನಿಕ ಭೂಗೋಳಶಾಸ್ತ್ರವು 'ಭೂಮಿ ಮತ್ತು ಅದರ ನಿವಾಸಿಗಳ ಬಗ್ಗೆ ತಿಳಿಸುತ್ತದೆ.


3. ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡುವ ಭೂಗೋಳಶಾಸ್ತ್ರದ ಶಾಖೆ ಯಾವುದು?


ಉ: ಖಗೋಳ ಭೂಗೋಳಶಾಸ್ತ್ರ.

ಉ: ಭೂಮಿಯ ಮೇಲಿನ ಜೀವಿಗಳ ಬಗೆಗೆ ಅಧ್ಯಯನ ಮಾಡುವ ಶಾಸ್ತ್ರವಾಗಿದೆ


4. ಜೀವ ಭೂಗೋಳಶಾಸ್ತ್ರವೆಂದರೇನು?


5. ಪಾಕೃತಿಕ ಭೂಗೋಳಶಾಸ್ತ್ರದ ಯಾವುದಾದರೂ ಒಂದು ಶಾಖೆಯನ್ನು ಹೆಸರಿಸಿ

ಉ: ಹವಮಾನಶಾಸ್ತ್ರ, ಸಾಗರಶಾಸ್ತ್ರ, ಖಗೋಳಶಾಸ್ತ್ರ ಮತ್ತು ಮಣ್ಣಿನಶಾಸ್ತ್ರ ಇತ್ಯಾದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮನೋವಿಜ್ಞಾನ ಕ್ವಿಜ್ 🧠 ಉನ್ನತ ಮಟ್ಟದ ಮನೋವಿಜ್ಞಾನ ಕ್ವಿಜ್ ಫಲಿತಾಂಶ ನೋಡಿ